ಸುದ್ದಿ ಸಾರ
ರೈತರು ಕೃಷಿ ಜೀವನದ ಸಾಧಕರು; ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು
ಕೃಷಿ ಇಲ್ಲದಿದ್ದರೆ ಮಾನವನಿಗೆ ಅನ್ನ ಸಿಕ್ಕುವುದಿಲ್ಲ. ಆಹಾರದ ಮೂಲ ಕೃಷಿ. ರೈತರು ಕೃಷಿ ಜೀವನದ ಸಾಧಕರು ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಆರಂಭವಾದ ಶರಣ ಸಂಸ್ಕೃತಿ ಉತ್ಸವಕ್ಕೆ ಮುನ್ನ ನಡೆಯುವ ವಿಶೇಷ ಪ್ರವಚನಮಾಲೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶರಣರು, ಸಂತರು, ದಾರ್ಶನಿಕರು ಅಂತರಂಗದ ಸಾಧಕರು ಎಂದು ಹೇಳಿದ ಶ್ರೀಗಳು ಪ್ರವಚನ ಎಂದರೆ ಅಂತರಂಗದ ಕೃಷಿ. ನಮ್ಮ ಅಂತರಂಗವನ್ನು ಸಾಗುವಳಿ ಮಾಡಬೇಕು ಎಂದು ಸಲಹೆ ನೀಡಿದರು. ಅಲ್ಲಮರು ಹೇಳಿದ ಹಾಗೆ ತನುವ ತೋಟವ ಮಾಡಿ ಎನ್ನುತ್ತಾರೆ. ಬಹಿರಂಗದ ನೋಟದ ಜತೆಗೆ ಅಂತರಂಗದ ನೋಟ ಬೇಕು ಎಂದು ನುಡಿದರು.
