Connect with us

ಶರಣ ಸಂಸ್ಕೃತಿ ಉತ್ಸವ 2020

ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವ ಶರಣ ಸಂಸ್ಕೃತಿ ಉತ್ಸವ

basavanna murugha sharanaru (1)

ಸುದ್ದಿ ಸಾರ

ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವ ಶರಣ ಸಂಸ್ಕೃತಿ ಉತ್ಸವ

ವಿಶೇಷ ಲೇಖನ: ನಿರಂಜನದೇವರಮನೆ ಸಾಹಿತಿಗಳು, ಚಿತ್ರದುರ್ಗ

ಭಾರತೀಯ ಧಾರ್ಮಿಕ ಇತಿಹಾಸ ಪರಂಪರೆಯಲ್ಲಿ ಕರ್ನಾಟಕ ಚರಿತ್ರೆಯ ಹನ್ನೆರಡನೆಯ ಶತಮಾನದಕಾಲಘಟ್ಟಅತ್ಯಂತ ಮಹತ್ವಪೂರ್ಣವಾದದ್ದು. ಆ ಕಾಲದ ವಿಚಾರ ಶಕ್ತಿ, ಆಧ್ಯಾತ್ಮಿಕಉನ್ನತಿ, ಸಾಮಾಜಿಕಆಂದೋಲನ ಇಡೀಜಗತ್ತಿಗೆ ಬಸವಾದಿ ಶರಣರು ಸಾರಿದ ಸಮಾಜೋ-ಧಾರ್ಮಿಕ ಕ್ರಾಂತಿಯಕಾಂತಿಯ ಕಿರಣಗಳು.

ಇಂಥ ಶರಣರಧರ್ಮ-ಸಂಸ್ಕೃತಿ ಯ ಪರಂಪರೆಯನ್ನು ತಮ್ಮದಾಗಿಸಿಕೊಂಡಿರುವ ಚಿತ್ರದುರ್ಗದ ಶೂನ್ಯ ಪೀಠ ಪರಂಪರೆಯ ಶ್ರೀ ಮುರುಘರಾಜೇಂದ್ರ ಬೃಹನ್ಮಠವು ಸದಾ ಬಹುಮುಖಿಯಾಗಿತನ್ನ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಪ್ರಸ್ತುತ ಶೂನ್ಯ ಪೀಠಾಧ್ಯಕ್ಷರೂ ಹಾಗೂ ತ್ರಿವಿಧ ದಾಸೋಹಿಗಳೂ ಆದ ಡಾ.ಶಿವಮೂರ್ತಿ ಮುರುಘಾ ಶರಣರುತಮ್ಮ ಪೀಠ ಪರಂಪರೆಯನ್ನುಆಧುನಿಕತೆಗೆತಕ್ಕಂತೆ ಸಂಯೋಜಿಸಿಕೊಂಡು ಮುರುಘಾ ಮಠದ ಆಸ್ಮಿತೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ಶ್ರೀ ಶರಣರು ಬಸವಧರ್ಮ ಮತ್ತು ಶರಣ ಸಂಸ್ಕೃತಿಯ ಸಾರ್ವಕಾಲಿಕ ಸತ್ಯಗಳನ್ನು ಈ ನಾಡಿಗೆ ಅನಾವರಣಗೊಳಿಸುವ ಮುಖೇನ ಅದರಅಖಂಡತೆಯನ್ನುಎತ್ತಿ ಹಿಡಿದಿದ್ದಾರೆ.

ಅಲ್ಲದೆ ಪರಂಪರೆಯೊಂದು ಸಮಕಾಲೀನ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆದಲ್ಲಿಅದು ಹೆಚ್ಚು ಅರ್ಥಪೂರ್ಣವಾಗಬಲ್ಲದುಎಂಬುದನ್ನು ತಿಳಿದು ಐತಿಹಾಸಿಕ ಪ್ರಜ್ಞೆ, ಪರಂಪರೆಯಅರಿವು, ಸಮಕಾಲೀನ ಸಂದರ್ಭ ಹಾಗೂ ಪೂರ್ಣದೃಷ್ಠಿಯೊಂದಿಗೆ ಭಕ್ತರ ಭಾವನೆಗಳನ್ನು ಗ್ರಹಿಸಿ ತಮ್ಮ ಮಠದ ಶರಣ ಸಂಸ್ಕøತಿಉತ್ಸವವನ್ನುಜಾತಿ-ಮತ-ಪಂಥಗಳ ಮೇರೆಯನ್ನು ಮೀರಿ ಸಮಾಜೋ-ಧಾರ್ಮಿಕಹಾಗೂ ಭಾವೈಕ್ಯದ ಆದರ್ಶ ನೆಲೆಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿಜಡ್ಡುಗಟ್ಟಿದ ಸಾಮಾಜಿಕ ಮತ್ತು ಸಾಂಸ್ಕøತಿಕ ಮೌಲ್ಯಗಳಿಗೆ ಆಧ್ಯಾತ್ಮಿಕ ಹಾಗೂ ವಾಸ್ತವಿಕ ಹೊಳಪು ನೀಡುವ ಮುಖೇನ ಅವುಗಳನ್ನು ಕಾರ್ಯಗತಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಉತ್ಸವ ನಡೆಸುವುದುಬಹು ವಿಶೇಷವಾಗಿರುತ್ತದೆ.

ಇತ್ತೀಚಿನ ವಿದ್ಯಾಮಾನಗಳಿಂದಾಗಿ ಎಲ್ಲೆಡೆ, ಅನಾರೋಗ್ಯ,ಅಶಾಂತಿ, ಅನೀತಿ, ಅಸ್ಥಿರತೆ, ಅರಾಜಕತೆ, ಭಯೋತ್ಪಾದನೆಹಾಗೂ ಅಂತಾರಾಷ್ಟ್ರೀಯ ಸಂಘರ್ಷದ ವಾತಾವರಣಉಂಟಾದ ಹಿನ್ನೆಲೆಯಲ್ಲಿ ಶ್ರೀ ಶರಣರು ಬಸವಧರ್ಮ ಮತ್ತು ವಚನ ಸಂಸ್ಕøತಿ ಪರ ಹೋರಾಟ ಮತ್ತು ಮಾನವೀಯ ಗುಣಗಳನ್ನು ಬೆರೆಸಿದ ಸಾಮಾಜಿಕ ನ್ಯಾಯದದೃಷ್ಠಿಯನ್ನು ವಿಸ್ತರಿಸುವುದರೊಂದಿಗೆ ಶರಣ ಸಂಸ್ಕೃತಿ ಉತ್ಸವದ ಘನತೆ-ಗೌರವಗಳನ್ನು ಹೆಚ್ಚಿಸಿಕೊಂಡಿದ್ದಾರೆ.

ಇಂಥಅಪರೂಪದ ಶರಣ ಸಂಸ್ಕøತಿಉತ್ಸವಅಕ್ಟೋಬರ್ 22 ರಿಂದ 28 ರ ವರೆಗೆಚಿತ್ರದುರ್ಗದ ಶ್ರೀ ಮಠದಅನುಭವ ಮಂಟಪದಲ್ಲಿಅತ್ಯಂತ ಸರಳವಾಗಿ ಜರುಗಲಿದೆ.ಕೊರೊನಾ ಸೋಂಕು ಆವರಿಸಿಕೊಂಡಿರುವ ಈ ಸಂದರ್ಭದಲ್ಲಿ ಸರ್ಕಾರ ರೂಪಿಸಿರುವ ಚೌಕಟ್ಟಿನೊಳಗೆ ಮತ್ತುಮಠದಕೆಲವು ನೀತಿ-ನಿಬಂಧನೆಗಳೊಂದಿಗೆ ಉತ್ಸವ ಅತ್ಯಂತ ಅರ್ಥಪೂರ್ಣವಾಗಿ ಜರುಗಲಿದೆ.

“ತಾವಿದ್ದಲಿಯೇ ಶರಣ ಸಂಸ್ಕೃತಿ ಉತ್ಸವ” ಎಂಬ ಶೀರ್ಷಿಕೆಯಡಿಯಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಯುಟ್ಯೂಬ್ ಹಗೂ ಫೇಜ್‍ನಲ್ಲಿ ವಿಶ್ವದಎಲ್ಲಾ ರಾಷ್ಟ್ರಗಳ ಜನತೆ ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿನಿತ್ಯಮಾನಸಿಕ ಪರವಶತೆಯನ್ನುತಂದುಕೊಡುವ ‘ಸಹಜ ಶಿವಯೋಗ’ ದಂಥ ಪ್ರಾತ್ಯಕ್ಷಿಕತೆಯನ್ನು ಏರ್ಪಡಿಸಲಾಗಿದೆ. ಮನಸ್ಸಿನ ಕಸಿವಿಸಿ, ಭಾವನೆಗಳ ದ್ವಂದ್ವ, ಬುದ್ಧಿ ವಿಕಾರಗಳಂತವುಗಳನ್ನು ದೂರ ಮಾಡಿ “ದಯೆಯೇಧರ್ಮದ ಮೂಲ” ಮತ್ತು“ಮಾನವೀಯತೆಯೇ ನಿಜವಾದ ಸಂಸ್ಕøತಿ”ಎಂಬುದನ್ನು ಶ್ರೀಗಳು ತೋರಿಸಿಕೊಡುತ್ತಾರೆ.

ದೇಸಿಯ ಸಾಹಿತ್ಯ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ‘ಜಾನಪದ ಕಲೆ’ಗಳ ಸ್ಪರ್ಧೆಯನ್ನುಏರ್ಪಡಿಸಲಾಗಿದೆ.ಭಜನೆ, ವೀರಗಾಸೆ, ಜಾನಪದ ಹಾಡು ಮತ್ತುಕುಣಿತ ಮುಂತಾದ ಪ್ರದರ್ಶನಗಳು ಅನಾವರಣಗೊಳ್ಳುವ ಮುಖೇನ ಇಂದಿನ ಪೀಳಿಗೆಗೆ ಜಾನಪದದಅರಿವು ಮೂಡಿ, ಪಾಶ್ಚಾತ್ಯವಿಕೃತ ಸಂಸ್ಕøತಿಯನ್ನುದೂರ ಮಾಡಲು ಸಹಕಾರಿಯಾಗಿದೆ.

ರಕ್ತದಾನ ಮತ್ತು ಪ್ಲಾಸ್ಮದಾನ ಶಿಬಿರದ ಮುಖೇನ ಇಂದಿನ ಕೊರೊನಾ ಸೋಂಕಿತರಚಿಕಿತ್ಸೆಗೆಅತ್ಯಗತ್ಯಅನ್ನುವುದನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ಇದೇ ಸಂದರ್ಭದಲ್ಲಿಕೊರೊನಾ ವಾರಿಯರ್ಸ್‍ಗಳ ಸೇವೆಯನ್ನು ಸ್ಮರಿಸಿ ಅವರುಗಳನ್ನು ಗೌರವಿಸಲಾಗುತ್ತದೆ.

ಕೃಷಿ, ಕೈಗಾರಿಕೆ ವಾಣಿಜ್ಯೋದ್ಯಮಗಳಂಥ ಆರ್ಥಿಕ ರಂಗಗಳ ಪ್ರಗತಿ ಮತ್ತುಉನ್ನತಿಯ ಮುಖೇನ ಜನತೆಯ ಬದುಕಿನ ಸುಧಾರಣೆ, ಬಯಲು ಸೀಮೆಯ ನೀರಾವರಿಯೋಜನೆ ಮತ್ತುಅದರ ಅನುಷ್ಠಾನ, ಪ್ರಸ್ತುತರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ-ಬಾಧಕಗಳ ಚರ್ಚೆ.ಆಧುನಿಕ ಸಮಾಜದಲ್ಲಿ ಮಹಿಳೆಯರ ಜವಾಬ್ದಾರಿ ಮತ್ತುಕೌಟುಂಬಿಕ ಹೊಣೆಗಾರಿಕೆ ಹಾಗೂ ಅವುಗಳ ಕಾರ್ಯಾಚರಣೆಯಲ್ಲಿ ಒತ್ತಡ-ಉದ್ವೇಗಗಳು ಉಂಟಾಗಿಅದರಿಂದಾಗುವ ದುಷ್ಪರಿಣಾಮಗಳು ಮತ್ತು ಅವುಗಳ ಮಾರ್ಗೋಪಾಯಗಳ ಬಗ್ಗೆ ಚಿಂತನೆಯನ್ನು ನಾಡಿನ ಘನ ವಿದ್ವಾಂಸರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆದ ವಿಶೇಷ ತಜ್ಞರಿಂದ ವಿಚಾರ ಮಂಡನೆನಡೆಯುತ್ತದೆ.

ಬಸವಾದಿ ಶರಣರ ತತ್ತ್ವ-ಸಿದ್ದಾಂತಗಳು ಜಾಗತಿಕ ಸಮುದಾಯದ ಸಂಘರ್ಷಕ್ಕೆ ಹೇಗೆ ವಿಶ್ವಶಾಂತಿಯನ್ನು ನೀಡಬಲ್ಲವು ಎಂಬ ಬಸವ ತತ್ತ್ವ-ವಿಶ್ವತತ್ತ್ವಗೋಷ್ಠಿ ಅತ್ಯಂತ ಪ್ರಮುಖವಾಗಿದೆ.

ಪ್ರಸ್ತುತಯುವ ಪೀಳಿಗೆಯನ್ನು ಆಕರ್ಷಿಸುತ್ತಿರುವಡ್ರಗ್ಸ್ ಮಾಫಿಯಾದಂದೆ ಹಾಗೂ ಇದರಿಂದಪಾರಾಗುವ ಹಾಗೂ ವ್ಯಸನ ಮುಕ್ತ ಸಮಾಜದ ನಿರ್ಮಾಣದಅವಶ್ಯಕತೆಕುರಿತ ಗೋಷ್ಠಿಯು ಅಷ್ಟೇ ಪ್ರಾಮುಖ್ಯತೆ ಪಡೆದಿದೆ.

ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಅದ್ವೀತಿಯ ಸಾಧನೆಗೈದ ಸಾಧಕರನ್ನು ಗುರುತಿಸಿ ಶ್ರೀ ಮುರುಘಾ ಮಠದ ಪ್ರಶಸ್ತಿಯಾದ “ಮುರುಘಾಶ್ರೀ” ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಈ ಸಾಲಿನಲ್ಲಿಅಭಿನಯಚತುರ ಮುಖ್ಯಮಂತ್ರಿಚಂದ್ರು, ನ್ಯಾಯದಾಸೋಹಿ ಜಸ್ಟೀಸ್ ಶ್ರೀ ಹೆಚ್.ಬಿಲ್ಲಪ್ಪ, ಮಧ್ಯಪಾನ ನಿಷೇದ ಹೋರಾಟಗಾರ್ತಿ ಶ್ರೀಮತಿ ಸ್ವರ್ಣಾಭಟ್, ಸಮಾಜ ಮುಖಿ ಶ್ರೀ ಎಸ್.ಷಣ್ಮುಖಪ್ಪ ಹಾಗೂ ಬಸವತತ್ತ್ವ ಅನುಷ್ಠಾನಕಾರರಾದ ಶ್ರೀ ಮ.ನಿ.ಪ್ರ. ಶಿವಾನಂದ ಸ್ವಾಮೀಜಿ ಭಾಜನರಾಗಿದ್ದಾರೆ.ಇನ್ನೊಂದು ಪ್ರಶಸ್ತಿಯಾದ ಭರಮಣ್ಣನಾಯಕ ಶೌರ್ಯ ಪ್ರಶಸ್ತಿಯನ್ನು ಹತ್ತು ಭಾಷೆಗಳನ್ನು ಮಾತನಾಡುವ ಬಾಲಕಿ ಹಾಗೂ ಸಾಧಕಿಜಾಹ್ನವಿ ಪನ್ವಾರ್ ತಮ್ಮದಾಗಿಸಿಕೊಂಡಿದ್ದಾರೆ.

ಜನತೆಯ ಮನಸ್ಸಿಗೆ ಮುದ ನೀಡುವ ಪ್ರಸಿದ್ಧ ಗಾಯಕ-ಕಲಾವಿದರಿಂದ ಸಂಗೀತ-ಸಾಂಸ್ಕøತಿಕ ಕಾರ್ಯಕ್ರಮಗಳು ಅತ್ಯಂತ ವೈವಿದ್ಯಮಯವಾಗಿ ಪ್ರದರ್ಶನಗೊಳ್ಳುತ್ತವೆ.

ಜನರನ್ನು ಸಂಕಷ್ಟಕ್ಕೀಡು ಮಾಡುತ್ತಿರುವಕೊರೊನಾ ಸೋಂಕನ್ನುಕುರಿತು ಶ್ರಿಗಳು ರಚಿಸಿರುವ “ಬದುಕಿನಡೆಗೆ” ರೂಪಕವನ್ನುಖ್ಯಾತರಂಗ ನಿರ್ದೇಶಕಕೃಷ್ಣಮೂರ್ತಿಕವತ್ವಾರ್ ನಿರ್ದೇಶಿಸಿ ಸಾಂಸ್ಕøತಿಕ ಸಂಭ್ರಮದಲ್ಲಿ ಅದನ್ನು ಪ್ರದರ್ಶನಗೊಳಿಸಲಿದ್ದಾರೆ, ಇದು ಸಹ ಉತ್ಸವದ ವಿಶೇಷತೆಗಳಲ್ಲಿ ಒಂದಾಗಿದೆ.

ಈ ಉತ್ಸವದಲ್ಲಿಗೀತಗಾಯನ, ಚಿತ್ರಕಲಾ ಪ್ರದರ್ಶನ, ವಚನಕಮ್ಮಟ ಪರೀಕ್ಷೆಯರ್ಯಾಂಕ್ ವಿಜೇತರಿಗೆ ಪ್ರಶಸ್ತಿ, ಸಾಕು ಪ್ರಾಣಿಗಳ ಪ್ರದರ್ಶನ ಹಾಗೂ ಸರಳ ಶರಣ ಸಂಸ್ಕøತಿಉತ್ಸವ, ರಾಜವಂಶಸ್ಥರ ಭಕ್ತಿ ಸಮರ್ಪಣೆ, ಶೂನ್ಯ ಪೀಠ ಸಿಂಹಾಸನರೋಹಣ, ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸ್ಮರಣೋತ್ಸವ ಮುಂತಾದ ವಿಶೇಷ ಕಾರ್ಯಕ್ರಮಗಳು ಈ ಸಂದರ್ಭದಲ್ಲಿಜರುಗುತ್ತವೆ.

“ಮುರುಘಾ ಶ್ರೀ” ಮ್ಯೂಸಿಯಂ ಲೋಕಾರ್ಪಣೆ

ಡಾ|| ಶಿವಮೂರ್ತಿ ಮುರುಘಾಶರಣರು ಹತ್ತಾರು ಶತಮಾನಗಳ ವರೆಗಿನಅಪೂರ್ವ ವಸ್ತುಗಳನ್ನು ಸಂಗ್ರಹಿಸಿ, ದೇಶ-ವಿದೇಶಗಳಿಂದ ಅಮೂಲ್ಯ ವಸ್ತುಗಳನ್ನು ತರಿಸಿ ಅವುಗಳನ್ನು ಕ್ರೂಢೀಕರಿಸಿಜೊತೆಗೆ ಶ್ರೀ ಮಠದ ಐತಿಹಾಸಿಕ ಶಾಸನಗಳು, ಸಾಧನಗಳು, ಪರಿಕರಗಳು, ಸಲಕರಣೆಗಳು ಹಾಗೂ ಮಠ ಪರಂಪರೆಯ ಪೂರ್ವ ಪೀಠಾಧ್ಯಕ್ಷರು ಬಳಸುತ್ತಿದ್ದ ವಸ್ತುಗಳು ಹಾಗೂ ಸಾಧನ-ಸಲಕರಣೆಗಳನ್ನು ಒಪ್ಪವಾಗಿಜೋಡಿಸಿ, ಪ್ರಸ್ತುತಶರಣರು ಪಡೆದಿರುವಗೌರವ-ಸನ್ಮಾನ ಪ್ರಶಸ್ತಿಗಳನ್ನು ಸೇರಿಸಿ ಇಡೀರಾಷ್ಟ್ರದಲ್ಲಿ ಬಹುಮುಖ್ಯವೆನಿಸಿದ ಅಂತರಾಷ್ಟ್ರೀಯ ಮಟ್ಟದ ಈ ಮ್ಯೂಸಿಯಂನ್ನುಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ತಮ್ಮಅಮೃತ ಹಸ್ತದಿಂದಇದೇಅಕ್ಟೋಬರ್ 24 ರಂದು ಲೋಕಾರ್ಪಣೆಗೊಳಿಸಲಿದ್ದಾರೆ.

ಈ ನಾಡಿನಇತಿಹಾಸದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಮುಖೇನ ನಡೆದಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಚಳುವಳಿಯ ಶರಣರ ಕಾಲಮಾನವನ್ನು ಮತ್ತೊಮ್ಮೆ ನೆನಪಿಸುತ್ತ ಈ ದಿನಮಾನಗಳಿಗೆ ಇಂಥ ಚಳುವಳಿ ಪ್ರಸ್ತುತ ಮತ್ತು ಅನಿವಾರ್ಯವೆಂಬ ಸಂದೇಶ ಈ ಉತ್ಸವದಲ್ಲಿ ಹರಿದಾಡುವ ಮುಖೇನ ಸಮಷ್ಟಿ, ಸಾತ್ವಿಕಸತ್ವಪೂರ್ಣ ಸಮಾಜದರಚನೆಗೆ ವೇದಿಕೆಯಾಗಿಜಗತ್ತಿನಜನಮನದಲ್ಲಿ ಶಾಶ್ವತವಾಗಿ ನೆಲೆಯೂರುತ್ತದೆ.

-ನಿರಂಜನದೇವರಮನೆ ಸಾಹಿತಿಗಳು,
ಚಿತ್ರದುರ್ಗ.
ಮೊ: 9449022069

 

Continue Reading
You may also like...

The Sharana Samskruthi Utsav 2020, popularly known as Dasara Mahotsava of Central Karnataka, would be held for 10 days from October 24 on the Bruhan Mutt, chitradurga

More in ಸುದ್ದಿ ಸಾರ

To Top