Connect with us

ಶರಣ ಸಂಸ್ಕೃತಿ ಉತ್ಸವ 2020

ಇಂದು ಆರು ಮಂದಿ ಸಾಧಕರಿಗೆ ಮುರುಘಾಶ್ರೀ ಪ್ರಶಸ್ತಿ ಹಾಗೂ ಭರಮಣ್ಣ ನಾಯಕ ಶೌರ್ಯ ಪ್ರಸಸ್ತಿ ಪ್ರದಾನ

murugha-matta-award

ಸುದ್ದಿ ಸಾರ

ಇಂದು ಆರು ಮಂದಿ ಸಾಧಕರಿಗೆ ಮುರುಘಾಶ್ರೀ ಪ್ರಶಸ್ತಿ ಹಾಗೂ ಭರಮಣ್ಣ ನಾಯಕ ಶೌರ್ಯ ಪ್ರಸಸ್ತಿ ಪ್ರದಾನ

ಸುದ್ದಿಒನ್ ವಿಶೇಷ, ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ತಾವಿದ್ದಲ್ಲಿಯೇ ಶರಣ ಸಂಸ್ಕೃತಿ ಉತ್ಸವದಲ್ಲಿ ಆರು ಮಂದಿ ಸಾಧಕರಿಗೆ ಮುರುಘಾಶ್ರೀ ಹಾಗೂ ಭರಣ್ಣ ನಾಯಕ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗಿತ್ತಿದೆ.

ಇಂದು ಶನಿವಾರ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದು, ಹುಲಸೂರು ಶ್ರೀ ಗುರುಬಸವ ಸಂಸ್ಥಾನ ಮಠದ ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು, ಕರ್ನಾಟಕ ಉಚ್ಛನ್ಯಾಲಯದ ನಿವೃತ್ತ ನ್ಯಾಯಾದೀಶ ಜಸ್ಟೀಸ್ ಎಚ್.ಬಿಲ್ಲಪ್ಪ, ಸುರತ್ಕಲ್ ನ ಮದ್ಯಪಾನ ನಿಷೇಧ ಹೋರಾಟಗಾರ್ತಿ ಸುವರ್ಣ ಭಟ್, ಎಸ್.ನಿಜಲಿಂಗಪ್ಪ ಟ್ರಸ್ಟ್ ನ ಎನ್.ಷಣ್ಮಖಪ್ಪ ಅವರಿಗೆ ಮುರುಘಾಶ್ರೀ ಪ್ರಶಸ್ತಿ, ವಂಡರ್ ಗರ್ಲ್ ಆಫ್ ಇಂಡಿಯಾ ಖ್ಯಾತಿಯ ಜಾಹ್ನವಿ ಪನ್ವಾರ್ ಅವರಿಗೆ ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.

ಶ್ರೀದುರುದುಂಡೇಶ್ವರ ಮಠದ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಸಚಿವರಾದ ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಶಾಸಕ ಗೂಳಿಹಟ್ಟಿ ಶೇಖರ್, ಮಾಜಿ ಸಚಿವ ಶಿವರಾಜ ತಂಗಡಿಗೆ ಭಾಗವಹಿಸುವರು.

ಮುರುಘಾ ಶ್ರೀ ಪ್ರಶಸ್ತಿ ಪುರಸ್ಕೃತ ಸಾಧಕರ ಪರಿಚಯ ಇಲ್ಲಿದೆ

ಡಾ. ಮುಖ್ಯಮಂತ್ರಿ ಚಂದ್ರು, ಚಲನಚಿತ್ರ ನಟರು, ಬೆಂಗಳೂರು

ತಮ್ಮ ವಿಶಿಷ್ಟವಾದ ಧ್ವನಿ ಮತ್ತು ಅಭಿನಯದ ಮೂಲಕ ಕನ್ನಡ ರಂಗಭೂಮಿ ಸಿನೆಮಾ ಹಾಗು ಕಿರುತೆರೆಗಳಲ್ಲಿ ಹಾಸ್ಯ, ಖಳ ಮತ್ತು ಪೆÇೀಷಕ ನಟರಾಗಿ ಆ ಪಾತ್ರಗಳಿಗೆ ಜೀವ ತುಂಬಿದ ಯಾವತ್ತೂ ಮಾಜಿ ಆಗದ `ಮುಖ್ಯಮಂತ್ರಿ’ ಎಂದೇ ಹೆಸರು ಮಾಡಿರುವ ಚಂದ್ರಶೇಖರ್ ಕನ್ನಡ ನಾಡಿಗೆ `ಮುಖ್ಯಮಂತ್ರಿ ಚಂದ್ರು’ ಎಂದೇ ಚಿರಪರಿಚಿತರು.

ನೆಲಮಂಗಲ ತಾಲ್ಲೂಕು ಹೊನ್ನಸಂದ್ರದ ಎನ್. ನರಸಿಂಹಯ್ಯ ಮತ್ತು ತಿಮ್ಮಯ್ಯ ದಂಪತಿಗಳ ಸುಪುತ್ರರಾಗಿ ಜನಿಸಿದ ಚಂದ್ರು `ಹುತ್ತವ ಬಡಿದರೆ’ ನಾಟಕದ ಪಾತ್ರದೊಂದಿಗೆ ರಂಗಭೂಮಿ ಪ್ರವೇಶಿಸಿದ ಶ್ರೀಯುತರಿಗೆ ವಿಶೇಷ ಜನಪ್ರಿಯತೆ ತಂದುದು `ಮುಖ್ಯಮಂತ್ರಿ’ ನಾಟಕದ ಮುಖ್ಯಮಂತ್ರಿ ಪಾತ್ರ. ಮುಂದೆ ರಂಗಭೂಮಿಯ ಕಲಾವಿದನಾಗಿ ಮಾತ್ರವಲ್ಲದೆ, ಇವರ ನಿರ್ದೇಶನದ ಹತ್ತಾರು ನಾಟಕಗಳು ಜನಪ್ರಿಯವಾದವು.

ಸುಮಾರು ನಾಲ್ಕು ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ಚಂದ್ರು ಅವರದ್ದು ವಿಶಿಷ್ಟವಾದ ಪ್ರತಿಭೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಇವರ ಮೂಕಾಭಿನಯ ಪ್ರದರ್ಶನಗಳು ಜನಪ್ರಿಯವಾಗಿವೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನಾಡು-ನುಡಿಯ ಸೇವೆಗೈದಿದ್ದಾರೆ. ರಂಗಭೂಮಿ, ಸಿನೆಮಾ ಕ್ಷೇತ್ರಗಳಲ್ಲಿಯ ಸಾಧನೆಗಾಗಿ ಕರ್ನಾಟಕ ನಾಟಕ ಅಕಾಡೆಮಿ, ರಂಗಭೂಮಿ ಮತ್ತು ಚಲನಚಿತ್ರ ಪ್ರಶಸ್ತಿ ಗೌರವಗಳಿಗೆ ಭಾಜನರಾಗಿರುವ ಮುಖ್ಯಮಂತ್ರಿ ಚಂದ್ರುರವರಿಗೆ ಕಲಬುರ್ಗಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ನಟರಾಗಿ ಶ್ರೀಯುತರ ಅನುಪಮ ಸೇವೆಯನ್ನು ಗುರುತಿಸಿರುವ ಶ್ರೀಮಠವು 2020ರ ಶರಣಸಂಸ್ಕøತಿ ಉತ್ಸವದಲ್ಲಿ ಮುರುಘಾಶ್ರೀ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದೆ.

 

ಜಸ್ಟೀಸ್ ಶ್ರೀ ಹೆಚ್. ಬಿಲ್ಲಪ್ಪ, ವಿಶ್ರಾಂತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಛನ್ಯಾಯಾಲಯ

ಶಿಕ್ಷಣದಿಂದ ಸುಸಂಸ್ಕøತ ಸಮಾಜ ನಿರ್ಮಾಣ ಸಾಧ್ಯ’ವೆಂದು ನಂಬಿ, ಭಾರತ ಸಂವಿಧಾನದ ಆಶಯಗಳನ್ನು ಬದುಕಿನುದ್ದಕ್ಕೂ ಅನುಸರಿಸುತ್ತಾ ತಮ್ಮ ವೃತ್ತಿಜೀವನದಲ್ಲಿ ಸಾರ್ಥಕತೆಯನ್ನು ಕಂಡವರು ಗೌರವಾನ್ವಿತ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಹೆಚ್. ಬಿಲ್ಲಪ್ಪನವರು.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಅರೇಹಳ್ಳಿಯ ಶ್ರೀ ಹನುಮಪ್ಪ ಮತ್ತು ಶ್ರೀಮತಿ ತಿಮ್ಮಮ್ಮ ದಂಪತಿಗಳ ಸುಪುತ್ರರಾಗಿ ದಿ. 08-10-1954ರಲ್ಲಿ ಜನಿಸಿದ ಬಿಲ್ಲಪ್ಪನವರು ಬಿ.ಎಸ್ಸಿ.,ಎಲ್.ಎಲ್.ಬಿ. ಪದವೀಧರರು. 1978ರಲ್ಲಿ ವಕೀಲ ವೃತ್ತಿಗೆ ಸೇರಿ, ಮುಂದೆ ಬೆಂಗಳೂರಿನ ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಹೈಕೋರ್ಟ್‍ನಲ್ಲಿ ಸರ್ಕಾರಿ ವಕೀಲರಾಗಿ, ಕೆಎಸ್‍ಆರ್‍ಟಿಸಿ ಪರ ವಕೀಲರಾಗಿಯೂ ಸೇವೆ ಸಲ್ಲಿಸಿದರು.

2003ರಲ್ಲಿ ಕರ್ನಾಟಕ ಹೈಕೋರ್ಟ್‍ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡು ತಮ್ಮ ಅಪಾರವಾದ ಕಾನೂನು ಪರಿಣತಿ ಮತ್ತು ಕಾರ್ಯಕ್ಷಮತೆಯ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶಿಷ್ಟ ಛಾಪು ಮೂಡಿಸಿ 2016ರಲ್ಲಿ ಸೇವಾ ನಿವೃತ್ತಿ ಹೊಂದಿದರು.

ನಿವೃತ್ತಿ ನಂತರ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ ಮಧ್ಯಸ್ಥರಾಗಿ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುವ ಶ್ರೀಯುತರು ಇಂದಿಗೂ ಕಾನೂನು ಅರಿವು ಕುರಿತ ವಿಶೇಷ ಉಪನ್ಯಾಸಗಳ ಮೂಲಕ ತಮ್ಮ ಅನುಭವವನ್ನು ಯುವ ಸಮುದಾಯಕ್ಕೆ ಧಾರೆ ಎರೆಯುತ್ತಾ ಬಂದಿದ್ದಾರೆ.

ಸರಳ, ಸಜ್ಜನ ವ್ಯಕ್ತಿತ್ವದ ಗೌರವಾನ್ವಿತ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಹೆಚ್. ಬಿಲ್ಲಪ್ಪನವರ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಲ್ಲಿಸಿರುವ ಅನುಪಮವಾದ ಸೇವೆಯನ್ನು ಗುರುತಿಸಿರುವ ಶ್ರೀಮಠವು 2020ರ ಶರಣಸಂಸ್ಕøತಿ ಉತ್ಸವದಲ್ಲಿ ಮುರುಘಾಶ್ರೀ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದೆ.

ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು, ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ, ಹುಲಸೂರು

ಒಂದು ಮಠದ ಪೀಠಾಧಿಕಾರಿಗಳಾಗಿ ಧರ್ಮಪ್ರಚಾರ, ಜಪ-ತಪ ಇತ್ಯಾದಿಗಳಿಗೆ ಸೀಮಿತರಾಗದೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ತ್ರಿಕರಣ ಶುದ್ಧಿಯಿಂದ ಅಹರ್ನಿಶಿ ಚಿಂತಿಸುವ ಸ್ವಾಮಿಗಳಲ್ಲಿ ಹುಲಸೂರಿನ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳವರೂ ಒಬ್ಬರು ಎಂದರೆ ಅತಿಶಯೋಕ್ತಿ ಎನಿಸದು.

ದಿ. 02-12-1952ರಲ್ಲಿ ಜನಿಸಿರುವ ಶ್ರೀಗಳು, ಪಡೆದದ್ದು ಔಪಚಾರಿಕ ಶಿಕ್ಷಣವಾದರೂ ಮುಧೋಳದ ಮೃತ್ಯುಂಜಯ ಶ್ರೀಗಳಿಂದ ಶರಣಧರ್ಮ ತರಬೇತಿ ಪಡೆದ ಸಾತ್ವಿಕ ಚೇತನ. 1972ರಲ್ಲಿ ಚಿಂಚೋಳಿಯ ಮುಕರಂಬಾ ಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡಾಗ ಎದುರಾದ ತೀವ್ರ ಬರಗಾಲಕ್ಕೆ ತುತ್ತಾದ ಚಿಂಚೋಳಿ ತಾಲ್ಲೂಕಿನ ಜನರಿಗೆ ಗಂಜಿಕೇಂದ್ರ ಸ್ಥಾಪಿಸಿ ನೆರವಾದ ಮಹಾದಾಸೋಹಿ. ಬಡ-ಹಿಂದುಳಿದ ಜನಸಮುದಾಯಗಳಿಗೆ ಸಂಚಾರಿ ಕನ್ನಡ ಶಿಕ್ಷಣ ನೀಡಿದ ಶಿಕ್ಷಣಪ್ರೇಮಿ.

1980ರಲ್ಲಿ ಶ್ರೀ ಗುರು ಬಸವೇಶ್ವರ ಸಂಸ್ಥಾನಮಠದ ಪೀಠಾಧಿಕಾರಿಗಳಾದ ಮೇಲೆ ಹಳ್ಳಿ ಹಳ್ಳಿಗಳಲ್ಲಿ ದುಶ್ಚಟಗಳ ನಿವಾರಣೆಗಾಗಿ ಜೋಳಿಗೆ ಹಿಡಿದು ಪಾದಯಾತ್ರೆ ಮಾಡುತ್ತಾ ಬಂದಿದ್ದಾರೆ. ನಾಡಿನ ಹಾಗೂ ಹೊರಭಾಗದಲ್ಲೂ ಪಾದಯಾತ್ರೆ ಮೂಲಕ ಬಸವತತ್ತ್ವ ಮತ್ತು ಭಾರತೀಯ ಸಂಸ್ಕøತಿ ಬಗ್ಗೆ ಅರಿವು ಮೂಡಿಸುತ್ತಾ ಸುಮಾರು 22 ಸಾವಿರ ಕಿ.ಮೀ. ಪಾದಯಾತ್ರೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.

ಪರಿಸರ, ಜೀವ-ಜಲ ಸಂರಕ್ಷಣೆ ಕಾರ್ಯಗಳ ಜೊತೆಗೆ ಶಿವಯೋಗ ಅನುಷ್ಠಾನ, ಶರಣಸಮ್ಮೇಳನ, ಕನ್ನಡ ಪ್ರಚಾರ, ಸದ್ಭಾವನಾ ಯಾತ್ರೆ, ಸಾಮೂಹಿಕ ಪ್ರಾರ್ಥನೆ, ವಚನ ಚಿಂತನೆ, ಪ್ರವಚನ, ಇಷ್ಟಲಿಂಗ ದೀಕ್ಷೆ ಮುಂತಾದ ಕಾರ್ಯಕ್ರಮಗಳ ಮೂಲಕ ಬಸವತತ್ವ ಪ್ರಚಾರದಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡಿರುವ ಶರಣಚೇತನವಾಗಿದ್ದಾರೆ.

ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳವರ ಸಮಾಜೋಧಾರ್ಮಿಕವಾದ ಅನುಪಮ ಸೇವೆಯನ್ನು ಗುರುತಿಸಿರುವ ಶ್ರೀಮಠವು 2020ರ ಶರಣ ಸಂಸ್ಕøತಿ ಉತ್ಸವದಲ್ಲಿ ಮುರುಘಾಶ್ರೀ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದೆ.

ಮದ್ಯಪಾನ ವಿರೋಧಿ ಆಂದೋಲನ ಸಮಿತಿ, ಸುರತ್ಕಲ್, ಕರ್ನಾಟಕ

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಗು ಸೌಹಾರ್ದತೆ ನೆಲೆಸಬೇಕೆಂಬ ಆಶಯ ಹೊಂದಿರುವ ಮದ್ಯಪಾನ ನಿಷೇಧ ಆಂದೋಲನವು ಕರ್ನಾಟಕದಾದ್ಯಂತ ಮದ್ಯ ನಿಷೇಧಗೊಳಿಸಿ ಕೋಟ್ಯಂತರ ಜನಸಾಮಾನ್ಯರ ಮಾನ-ಪ್ರಾಣ ಉಳಿಸಿ ಎಂಬ ಘೋಷವನ್ನು ಮೊಳಗಿಸಿ ನಿರಂತರ ಹೋರಾಟ ಮಾಡುತ್ತಿರುವುದು ಸ್ವಾಗತಾರ್ಹ.

ಸುರತ್ಕಲ್‍ನ ಶ್ರೀಮತಿ ಸ್ವರ್ಣಾಭಟ್ ಮತ್ತು ಅವರ ತಂಡದವರು ಅನೇಕ ವರ್ಷಗಳಿಂದ ಕರ್ನಾಟಕದಲ್ಲಿ ಮದ್ಯಪಾನ ನಿಲ್ಲಿಸಬೇಕೆಂದು ಅನೇಕ ಕಡೆ ಸತ್ಯಾಗ್ರಹ ಮಾಡುತ್ತ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಸಾಮಾಜಿಕ ನ್ಯಾಯದ ಸ್ಪಷ್ಟ ಸೈದ್ಧಾಂತಿಕ ಬದ್ಧತೆಯುಳ್ಳ ಸರ್ಕಾರವು ಗಂಭೀರವಾಗಿ ಯೋಚಿಸಿ ರಾಜ್ಯದಲ್ಲಿ ಮದ್ಯ ನಿಷೇಧ ಪ್ರಕ್ರಿಯೆಗೆ ಮುಂದಾಗಬೇಕೆಂಬ ಆಗ್ರಹವನ್ನಿಟ್ಟುಕೊಂಡು ಅಕ್ಟೋಬರ್ 2, 2016ರ ಗಾಂಧಿ ಜಯಂತಿಯಂದು 45 ಸಾವಿರ ಮಹಿಳೆಯರನ್ನು ಸೇರಿಸಿ ಬೃಹತ್ ಆಂದೋಲನವನ್ನು ನಡೆಸಿದ್ದು ದಾಖಲೆಯೇ ಸರಿ.

ಡಾ. ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಅನೇಕ ಮಠಾಧೀಶರು, ಪ್ರಗತಿಪರರು, ಸಾಹಿತಿಗಳು, ಗಣ್ಯರನ್ನು ಸೇರಿಸಿ ಮದ್ಯ ನಿಷೇಧಕ್ಕಾಗಿ ಆಂದೋಲನಗಳನ್ನು ನಡೆಸಿ ಸರ್ಕಾರದ ಗಮನವನ್ನು ಸೆಳೆದಿದ್ದಾರೆ.

ಪತ್ರ ಚಳುವಳಿ ಹಾಗು ಮನಿ ಆರ್ಡರ್ ಚಳುವಳಿ, ಗ್ರಾಮಸಭೆಯಲ್ಲಿ ಮದ್ಯ ನಿಷೇಧಕ್ಕಾಗಿ ಠರಾವು ಪಾಸು ಮಾಡಿಸಿದ್ದು ಕಾನೂನು ಹೋರಾಟಕ್ಕೂ ಮುಂದಾಗಿರುವ ಮದ್ಯಪಾನ ನಿಷೇಧ ಆಂದೋಲನ ಕರ್ನಾಟಕ ಇವರ ಸೇವೆಯನ್ನು ಗುರುತಿಸಿರುವ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಶರಣಸಂಸ್ಕøತಿ ಉತ್ಸವ-2020 ರಂದು ಪ್ರತಿಷ್ಠಿತ ಮುರುಘಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಎಸ್. ಷಣ್ಮುಖಪ್ಪ, ಧರ್ಮದರ್ಶಿಗಳು, ಎಸ್. ನಿಜಲಿಂಗಪ್ಪ ಟ್ರಸ್ಟ್, ಚಿತ್ರದುರ್ಗ

ಸಮಾಜವು ಬಲಿಷ್ಠವಾಗುವುದು ಸಕ್ರಿಯ ಕಾರ್ಯಕರ್ತರಿಂದ. ಸಮಾಜಕ್ಕೆ ಕಾರ್ಯಕರ್ತರೆ ಆಸ್ತಿ. ಕಾರ್ಯಕರ್ತರಲ್ಲಿ ಶಿಸ್ತು, ಬದ್ಧತೆ, ಸಾಮಾಜಿಕ ಕಾಳಜಿ ಇರಬೇಕಾಗುತ್ತದೆ. ಇಂತಹ ಎಲ್ಲ ಗುಣಗಳನ್ನು ಒಳಗೊಂಡು ಸದಾ ಸಮಾಜ ಸೇವೆಯೇ ದೇವರ ಸೇವೆ ಎಂದು ನಂಬಿ ನುಡಿದಂತೆ ನಡೆದವರು ಧರ್ಮದರ್ಶಿಗಳಾದ ಎಸ್. ಷಣ್ಮುಖಪ್ಪನವರು.

ಮೂಲತಃ ಚಿತ್ರದುರ್ಗದವರಾದ ಶ್ರೀಮತಿ ಕೊಟ್ರಮ್ಮ ಮತ್ತು ಶ್ರೀ ಹಾದಿಕೆರೆ ಬಿ. ಶಿವಲಿಂಗಪ್ಪ ದಂಪತಿಗಳ ಸುಪುತ್ರರಾಗಿ ಜನಿಸಿದ ಶ್ರೀಯುತರು ಕೆ.ಇ.ಬಿ. ಇಲಾಖೆಯಲ್ಲಿ ಸೇವೆಯನ್ನು ಪ್ರಾರಂಭಿಸಿ ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದವರು. ಶ್ರೀಮುರುಘರಾಜೇಂದ್ರ ಮಠದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನೌಕರಿ ಪಡೆದು ಇರುವಷ್ಟುರಲ್ಲೆ ಗೌರವದ ಬದುಕನ್ನು ಕಂಡುಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗಿಯೊಬ್ಬರು ಹೇಗೆ ಕ್ರಿಯಾಶೀಲರಾಗಬಹುದು ಎಂಬುದಕ್ಕೆ ಇವರೆ ಸಾಕ್ಷಿ. ಆಡಂಬರಕ್ಕೆ ಅಂಟಿಕೊಳ್ಳದೆ ಕಾಯಕ ಮತ್ತು ದಾಸೋಹವನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದಿರುವ ಶ್ರೀಯುತರು ಕೆ.ಇ.ಬಿ. ಷಣ್ಮುಖಪ್ಪ ಎಂದೇ ಪ್ರಸಿದ್ಧರು.

ಇವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಶರಣಸಂಸ್ಕøತಿ ಉತ್ಸವ-2020ರಂದು ಪ್ರತಿಷ್ಠಿತ ‘ಮುರುಘಾಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದೆ.

 

Continue Reading
You may also like...

The Sharana Samskruthi Utsav 2020, popularly known as Dasara Mahotsava of Central Karnataka, would be held for 10 days from October 24 on the Bruhan Mutt, chitradurga

More in ಸುದ್ದಿ ಸಾರ

To Top